ಸುದ್ದಿ ಜಗತ್ತು

GST ವ್ಯಾಪ್ತಿಗೆ ಕಚ್ಚಾ ತೈಲ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಬಾರಿ ಇಳಿಕೆ ?

ಪೆಟ್ರೋಲಿಯಂ ಉತ್ಪನ್ನಗಳನ್ನು ಒಂದು ದೇಶ, ಒಂದೇ ತೆರಿಗೆ’ ಎಂಬ ನಿಟ್ಟಿನಲ್ಲಿ ಜಾರಿಗೊಂಡಿರುವ ‘ಜಿಎಸ್‌ಟಿ’ ವ್ಯಾಪ್ತಿಗೆ ತಂದರೆ, ಪೆಟ್ರೋಲ್‌ ಬೆಲೆ ಅರ್ಧಕ್ಕೆ ಅರ್ಧ ಕಡಿಮೆ ಆಗಲಿದೆ ಎಂಬ ವಾದ ಕೇಳಿಬರುತ್ತಿದೆ ಇದಕ್ಕೆ ಪುಷ್ಟಿ ನೀಡುವಂತೆ ಮೋದಿ ಕ್ಯಾಬಿನೆಟ್ ದರ್ಜೆಯ ಸಚಿವ ಧರ್ಮೇಂದ್ರ ಪ್ರಧಾನ್ ಈ ಬಗ್ಗೆ ಹೇಳಿಕೆ ಕೊಟ್ಟಿದ್ದು ಈಗ ದೇಶದಾದ್ಯಂತ ಸಂಚಲನ ಮೂಡಿಸಿದೆ.

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಬಾರಿ ಕುಸಿತ್ತ ಕಂಡರೂ ಭಾರತದಲ್ಲಿ ಮಾತ್ರ ಅತಿ ಹೆಚ್ಚಿನ ದರಕ್ಕೆ ಪೆಟ್ರೋಲ್, ಡೀಸೆಲ್‌ ಮಾರಾಟವಾಗುತ್ತಿದೆ ಇದರಿಂದ ಕಳೆದ ಮೂರು ವರ್ಷಗಳಿಂದ ವಿರೋಧ ಪಕ್ಷಗಳು ನಾನಾ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಾ ಇದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ ಆದರೆ ಇದೀಗ ಸಾರ್ವಜನಿಕ ವಲಯದಲ್ಲಿ ಉಂಟಾದ ಆಕ್ರೋಶಕ್ಕೆ ಮೋದಿ ಸರಕಾರ ಎಚ್ಚೆತ್ತು ಕೊಂಡಿದ್ದು ಈ ಸಂಭಂದ ಮಾಹಿತಿ ಕಲೆ ಹಾಕುತ್ತಾ ಇದ್ದು ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್,ಟಿ ವ್ಯಾಪ್ತಿಗೆ ತರಲು ಮುಂದಾಗಿದೆ ಎಂದು ತಿಳಿದು ಬಂದಿದೆ

ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್,ಟಿ ವ್ಯಾಪ್ತಿಗೆ ಬಂದರೆ ಯಾವ ರೀತಿಯಲ್ಲಿ ದರಗಳು ಇರುತ್ತವೆ ಇಲ್ಲಿದೆ ನೋಡಿ

ಒಂದು ವೇಳೆ ಜಿಎಸ್‍ಟಿ ವ್ಯಾಪ್ತಿಗೆ ತಂದು 12% ತೆರಿಗೆ ವಿಧಿಸಿದರೆ 38.01 ರೂ. 18% ತೆರಿಗೆ ವಿಧಿಸಿದರೆ 40.05 ರೂ., 28% ತೆರಿಗೆ ವಿಧಿಸಿದರೆ 43.44 ರೂ. ಆಗಬಹುದು. ಒಂದು ವೇಳೆ ಜಿಎಸ್‍ಟಿ 28% ವಿಧಿಸಿದರೆ 43.44 ರೂ. ಆಗಬಹುದು. ಮತ್ತು ಹೆಚ್ಚುವರಿಯಾಗಿ 22% ಜಿಎಸ್‍ಟಿ ಸೆಸ್ (compensation cess) ವಿಧಿಸಿದರೂ ಬೆಲೆ 50.91 ರೂ.ಆಗಲಿದೆ

ಈಗಾಗಲೇ 2014ರ ನವೆಂಬರ್‌ನಿಂದ 2016ರ ಜನವರಿವರೆಗೆ ಕೇಂದ್ರ ಸರ್ಕಾರವು ಇಂಧನಗಳ ಮೇಲಿನ ತೆರಿಗೆಯನ್ನು ಒಂಬತ್ತು ಬಾರಿ ಏರಿಕೆ ಮಾಡಿತ್ತು. ಕೇಂದ್ರ ಹಣಕಾಸು ಸಚಿವರು, ರಾಜ್ಯಗಳ ಹಣಕಾಸು ಸಚಿವರು ಇರುವ ಜಿಎಸ್‍ಟಿ ಮಂಡಳಿಯಲ್ಲಿ ಒಪ್ಪಿಗೆ ಸಿಕ್ಕಿದರೆ ಪೆಟ್ರೋಲ್ ಬೆಲೆ ಕಡಿಮೆಯಾಗಬಹುದು. ಅಷ್ಟೇ ಅಲ್ಲದೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ದೇಶಾದ್ಯಂತ ಏಕರೂಪದ ದರ ವಿಧಿಸಬಹುದು ಇದರಿಂದ ಗ್ರಾಹಕರಿಗೆ ಲಾಭವಾಗಲಿದೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದರು

  • 3.7K
    Shares