ಸ್ಪೂರ್ತಿ

900 ಕ್ಕೂ ಹೆಚ್ಚು ಮಕ್ಕಳನ್ನು ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಿಸಿದ ಲೇಡಿ ಸಿಂಘಂ ರೇಖಾ ಮಿಶ್ರಾ ನಿಮಗೊತ್ತಾ?

ಮಕ್ಕಳು ಜೀವನದಲ್ಲಿ ಸ್ವಲ್ಪ ಹಣವನ್ನು ಮತ್ತು ಸ್ಥಿರತೆ ಗಳಿಸುವ ಪ್ರಯತ್ನದಲ್ಲಿ, ಹಾಗೂ ಉತ್ತಮ ಜೀವನವನ್ನು ಪಡೆಯಲು ಕೆಲಸ ಮತ್ತು ಏನಾದರೂ ಸಾಧನೆಯ ಅನ್ವೇಷಣೆಯಲ್ಲಿ ಇತರ ನಗರಗಳಿಗೆ ಮನೆ ಬಿಟ್ಟು ಹೋಗುತ್ತಾರೆ. ಅನೇಕ ಕಾಣೆಯಾದ ಪ್ರಕರಣಗಳ ವರದಿಯಲ್ಲಿ 10 ರಿಂದ 16 ವಯಸ್ಸಿನೊಳಗಿನ ಮಕ್ಕಳು ಹೆಚ್ಚಾಗಿ ಕಾಣೆಯಾಗಿದ್ದಾರೆ. ಅಂತಹ ಸಂದರ್ಭಗಳಲ್ಲಿ, ಪೊಲೀಸರು ತಮ್ಮ ಕಠಿಣ ಶ್ರಮದಿಂದ ಮಕ್ಕಳನ್ನು ಪತ್ತೆಹಚ್ಚಿ ಅವರ ಪೋಷಕರೊಂದಿಗೆ ಒಂದುಗೂಡಿಸುತ್ತಾರೆ.

ಇಂತಹ ಪೊಲೀಸ್ ಅಧಿಕಾರಿಗಳಲ್ಲಿ ರೇಖಾ ಮಿಶ್ರಾ ಒಬ್ಬರು. ಇವರು 2016-17ರಲ್ಲಿ ಕಾಣೆಯಾದ 900 ಕ್ಕಿಂತಲೂ ಹೆಚ್ಚು ಮಕ್ಕಳನ್ನು ಪೋಷಕರೊಂದಿಗೆ ಸೇರಿಸಿದ್ದಾರೆ. 2016 ರಲ್ಲಿ ಮಿಶ್ರಾ ಅವರು 434 ಮಕ್ಕಳನ್ನು ತಮ್ಮ ಕುಟುಂಬಗಳೊಂದಿಗೆ ಸೇರಿಸಲು ಸಹಾಯ ಮಾಡಿದರು, ಅದರಲ್ಲಿ 45 ಮಂದಿ ಬಾಲಕಿಯರು ಮತ್ತು 389 ಮಂದಿ ಹುಡುಗರಾಗಿದ್ದರು. 2017 ರಲ್ಲಿ, ಮಿಶ್ರಾ 500 ಕ್ಕೂ ಹೆಚ್ಚು ಕಾಣೆಯಾದ ಮಕ್ಕಳನ್ನು ತಮ್ಮ ತಮ್ಮ ಕುಟುಂಬಗಳಿಗೆ ಮತ್ತೆ ಸೇರಿಸಿದರು.

ಈ ಮಕ್ಕಳು ತಮ್ಮ ಕಳಪೆ ಆರ್ಥಿಕ ಪರಿಸ್ಥಿತಿಗಳಿಂದಾಗಿ ಮನೆಗಳನ್ನು ತ್ಯಜಿಸಿ ಮುಂಬೈಗೆ ಬರುತ್ತಾರೆ. ಅನೇಕ ಬಾರಿ ಈ ಮಕ್ಕಳು ಗುಂಪುಗಳಾಗಿ ತಮ್ಮ ಮನೆಯಿಂದ ಓಡಿಹೋಗುತ್ತಾರೆ. ಈ ಮಕ್ಕಳನ್ನು ಸಿ.ಎಸ್. ಟಿ.ಎಮ್ ನಲ್ಲಿ ನಾವು ಕಂಡುಕೊಂಡಿದ್ದೇವೆ. ಈ ಮಕ್ಕಳು ಹೆಚ್ಚಾಗಿ 10-16 ವಯಸ್ಸಿನವರಾಗಿದ್ದಾರೆ‌ ಎಂದು ಆರ್ ಪಿ ಎಫ್ ಪೊಲೀಸ್ ಇನ್ಸ್ಪೆಕ್ಟರ್ ರೇಖಾ ಮಿಶ್ರಾ ಹೇಳಿದ್ದಾರೆ.

ಸಿ.ಎಸ್.ಟಿ.ಎಂ ಕಚೇರಿಯಲ್ಲಿ ಆರ್.ಪಿ.ಎಫ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ರೇಖಾ ಮಿಶ್ರಾ ನೇಮಕಗೊಂಡಿದ್ದಾರೆ. ಮೊದಲಿಗೆ, ಅವರು ಮಹಿಳಾ ಭದ್ರತೆಯನ್ನು ನಿರ್ವಹಿಸುತ್ತಿದ್ದರು ಆದರೆ ಈಗ ಅವರಿಗೆ ಮಕ್ಕಳ ಕಲ್ಯಾಣದ ಜವಾಬ್ದಾರಿಯನ್ನು ನೀಡಲಾಗಿದೆ. ಮಿಶ್ರಾ ಅವರು ಉತ್ತರ ಪ್ರದೇಶದವರಾಗಿದ್ದು ಮತ್ತು ಆಕೆ ತನ್ನ ಕುಟುಂಬದಲ್ಲಿ ಏಕೈಕ ಅಧಿಕಾರಿಯಾಗಿದ್ದಾರೆ.