ರಾಷ್ಟ್ರೀಯ

ಲೋಕಪಾಲ್ ಬಿಲ್ ಜಾರಿಗೆ ಅಡ್ಡಗಾಲು ಹಾಕಿದ ಕಾಂಗ್ರೆಸ್.

ಅಣ್ಣಾ ಹಜಾರೆಯವರು ತಮ್ಮ ಕನಸಿನ ಲೋಕ ಪಾಲ್ ಮಸೂದೆಯ ಜಾರಿಗಾಗಿ ಮಾಡಿದ ಹೋರಾಟವನ್ನು ಯಾರೂ ಸಹ ಮರೆಯುವಂತಿಲ್ಲ. ಅವರು ಅಂದು ಅವರದೇ ಆದ ರೀತಿಯಲ್ಲಿ ಹೋರಾಟ ಮಾಡಿ ಲೋಕಪಾಲ್ ಮಸೂದೆ ಜಾರಿಗೆ ತರಲು ಶತ ಪ್ರಯತ್ನ ಮಾಡಿದ್ದರು. ಆದರೆ ಇಲ್ಲಿಯವರೆಗೂ ಅದು ಯಶಸ್ವಿಯಾಗಿ ಜಾರಿಯಾಗಲು ಸಾಧ್ಯವಾಗಿಲ್ಲ. ಅನೇಕ ಬಾರಿ ಉಪವಾಸ ಸತ್ಯಾಗ್ರಹವನ್ನು ಸಹ ಮಾಡಿದ್ದರು ಅಣ್ಣಾ ಹಜಾರೆಯವರು‌. ಲೋಕಪಾಲ್ ಜಾರಿಗೊಳಿಸಿ ರಾಷ್ಟ್ರ ಮಟ್ಟದಲ್ಲಿ ಭ್ರಷ್ಟಾಚಾರ ತಡೆಗಟ್ಟುವ ಕನಸು ಅವರದಾಗಿತ್ತು.

ಈಗಾಗಲೇ ಲೋಕಪಾಲ್ ಮಸೂದೆ ಸಂಸತ್ ನಲ್ಲಿ ಮಂಡನೆಯಾಗಿದ್ದು, ಅನುಮೋದನೆ ಕೂಡ ದೊರೆತಿದೆ. ಜೊತೆಗೆ ಮೊದಲ ಹೆಜ್ಜೆಯಾಗಿ ಗುರುವಾರ ಆಯ್ಕೆ ಸಮಿತಿಯ ಮೊದಲ ಸಭೆ ಕೂಡ ನಡೆದಿದೆ. ಆದರೆ ಕಾಂಗ್ರೆಸ್ ಎಂದಿನಂತೆ ಕೇಂದ್ರದ ನಡೆಗೆ ಅಡ್ಡಗಾಲು ಹಾಕಿದೆ. ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಸಭೆಯನ್ನೇ ಬಹಿಷ್ಕರಿಸಿದ್ದಾರೆ. ಆ ಮೂಲಕ ಕೇಂದ್ರ ಸರ್ಕಾರಕ್ಕೆ ಮೊದಲ ನಡೆಯಲ್ಲೆ ಸ್ವಲ್ಪ ಮಟ್ಟಿನ ಹಿನ್ನಡೆ ಉಂಟಾಗಿದೆ. ಲೋಕಪಾಲ್ ಆಯ್ಕೆ ಸಮಿತಿಗೆ ತಮ್ಮನ್ನು ವಿಶೇಷ ಆಹ್ವಾನಿತರನ್ನಾಗಿ ನೇಮಿಸಿದ್ದಕ್ಕೆ ಅಸಮಾದಾನ ವ್ಯಕ್ತಪಡಿಸಿರುವ ಖರ್ಗೆ ಸಭೆಯನ್ನು ಧಿಕ್ಕರಿಸಿದ್ದಾರೆ. ವಿಶೇಷ ಆಹ್ವಾನಿತರಾಗಿ ನೇಮಕವಾದವರಿಗೆ ಲೋಕಪಾಲ್ ಮಸೂದೆಯ ಆಯ್ಕೆ ಪ್ರಕ್ರಿಯೆಯಲ್ಲಿ ಅಭಿಪ್ರಾಯ ತಿಳಿಸಲು ಮತ್ತು ಮತದಾನ ಮಾಡಲು ಅಧಿಕಾರವಿಲ್ಲದ ಕಾರಣ ಸಭೆಯನ್ನು ಧಿಕ್ಕರಿಸಿದ್ದೇನೆ ಎಂಬ ಕಾರಣವನ್ನು ಖರ್ಗೆಯವರು ನೀಡಿದ್ದಾರೆ.

ಇಂದು ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಲೋಕಪಾಲ್ ಮಸೂದೆಗೆ ಅಡ್ಡಗಲಾಗಿ ನಿಂತಿರುವುದು ಇದೇ ಕಾಂಗ್ರೆಸ್. ಲೋಕಪಾಲ್ ಮಸೂದೆಯಲ್ಲಿನ ಕೇಂದ್ರದ ವಿಳಂಬ ನೀತಿಯನ್ನು ಪ್ರಶ್ನಿಸಿ ಶಾಂತಿಭೂಷಣ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರ ಪ್ರತಿಪಕ್ಷ ನಾಯಕರು ಇಲ್ಲದ ಕಾರಣ ಇದು ವಿಳಂಬವಾಗಿವೆ ಎಂದಿತ್ತು. ಅತ್ತ ಕಾಂಗ್ರೆಸ್ ಲೋಕಪಾಲ್ ಮಸೂದೆ ಜಾರಿ ತರುವ ಪರ ನಿಲ್ಲುವ ಬಗ್ಗೆ ಮಾತನಾಡುತ್ತಲೇ ಸದ್ದಿಲ್ಲದೇ ನಮ್ಮ ರಾಜ್ಯದಲ್ಲಿದ್ದ ಲೋಕಾಯುಕ್ತಕ್ಕೆ ಎಳ್ಳುನೀರು ಬಿಟ್ಟಿರುವುದು ವಿಪರ್ಯಾಸ!

ಎಲ್ಲಿಯವರೆಗೆ ಈ ಲೋಕಾಯುಕ್ತ ಸಂಸ್ಥೆ ಇರುತ್ತದೆಯೋ ಅಲ್ಲಿಯವರೆಗೆ ರಾಜ್ಯದ ಭ್ರಷ್ಟರಿಗೆ ಸಮಸ್ಯೆ ತಪ್ಪಿದ್ದಲ್ಲ ಎಂಬ ಸ್ಪಷ್ಟ ಅರಿವು ಇದ್ದ‌ ಕಾರಣ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಮಾಡಿದ ಮೊದಲ ಕೆಲಸ ಲೋಕಾಯುಕ್ತವನ್ನು ಬದಿಗೆ ತಳ್ಳಿದ್ದು..! ಇನ್ನು ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಲೋಕಪಾಲ್ ಮಸೂದೆಯಾಗಬೇಕೆಂದು ಹೋರಾಟ ಮಾಡುತ್ತಿದ್ದವರ ಮೇಲೆ ಲಾಟಿ ಚಾರ್ಜ್ ಮಾಡುವ ಮುಖಾಂತರ ಲೋಕಪಾಲ್ ಮಸೂದೆಯ ಅಣ್ಣಾ ಹಜಾರೆಯವರ ಕನಸನ್ನ ಕನಸಾಗಿಯೇ ಇಡಲು ಯತ್ನಿಸಿತ್ತು. ಇದೀಗ ಮೋದಿ‌ ಸರ್ಕಾರ ಜಾರಿಗೆ ತರಲು ಮುಂದಾಗುತ್ತಿದೆ. ಅದರಿಂದ ಮೋದಿಯವರು ಮತ್ತಷ್ಟು ಬೆಳೆಯುತ್ತಾರೆ ಎನ್ನುವ ಸ್ಪಷ್ಟ ಪರಿಕಲ್ಪನೆ ಕಾಂಗ್ರೆಸ್ ಗಿದೆ. ಹಾಗಾಗಿಯೇ ಒಂದೊಂದೇ ವಿವಾದ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಯಾರು ಎಷ್ಟೇ ವಿರೋಧಿಸಿದರೂ ಸಹ ಲೋಕ್ ಪಾಲ್ ಮಸೂದೆ ಜಾರಿಬರುವುದನ್ನ ತಪ್ಪಿಸಲು ಅಸಾಧ್ಯ ಎಂದು ಇದೇ ಸಂದರ್ಭ ಬಿಜೆಪಿ ಹೇಳಿದೆ.

ಬರಹ: webಕನ್ನಡ.

  • 1.3K
    Shares