ಸುದ್ದಿ ಜಗತ್ತು

ರಾಹುಲ್ ನಾಯಕನಾಗಲು ಅಯೋಗ್ಯ. ಹಾರ್ದಿಕ್ ಪಟೇಲ್.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ನನ್ನ ನಾಯಕರಲ್ಲ, ಅವರು ನಾಯಕನಾರಲು ಅಯೊಗ್ಯ, ಅವರ ಸಹೋದರಿ ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶಿಸುವುದಕ್ಕೆ ತಾನು ಕಾಯುತ್ತಿರುವುದಾಗಿ ಪಟಿದಾರ್ ನಾಯಕ ಹಾರ್ದಿಕ್ ಪಟೇಲ್ ಹೇಳಿದ್ದಾರೆ.

ಮುಂಬೈನಲ್ಲಿ ಮಾತನಾಡಿದ ಹಾರ್ದಿಕ್ ಪಟೇಲ್, ರಾಹುಲ್ ಗಾಂಧಿ ಅವರನ್ನು ವೈಯಕ್ತಿಕವಾಗಿ ಇಷ್ಟಪಡುತ್ತೇನೆ. ಆದ್ರೆ ಅವರನ್ನು ನನ್ನ ನಾಯಕರೆಂದು ಒಪ್ಪಿಕೊಳ್ಳಲ್ಲ ಏಕೆಂದ್ರೆ ಅವರು ನನ್ನ ನಾಯಕರಲ್ಲ ಎಂದು ತಿಳಿಸಿದರು.

ಇದೇ ವೇಳೆ ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶಿಸುವುದಕ್ಕೆ ತಾವು ಕಾಯುತ್ತಿರುವುದಾಗಿ ಹಾರ್ದಿಕ್ ಹೇಳಿದ್ದಾರೆ. ಇನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದರ ಬಗ್ಗೆ ಸ್ಪಷ್ಟಪಡಿಸಿ, ತಾವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಚುನಾವಣೆಗೆ ಸ್ಪರ್ಧಿಸಲು 25 ವರ್ಷ ವಯಸ್ಸಾಗಿರಬೇಕು. ಆದ್ರೆ ನನ್ನ ವಯಸ್ಸು 24. ಆದ್ದರಿಂದ ನಾನು ಎಲೆಕ್ಷನ್‌‌ಗೆ ನಿಲ್ಲಲ್ಲ ಎಂದರು.

ವಯಸ್ಸಿನಿಂದಾಗಿ ಕಳೆದ ಗುಜರಾತ್‌ ಚುನಾವಣೆಯಲ್ಲೂ ಹಾರ್ದಿಕ್ ಪಟೇಲ್ ಸ್ಪರ್ಧಿಸಿರಲಿಲ್ಲ. ಜೊತೆಗೆ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಾರ್ದಿಕ್ ಪಟೇಲ್‌ ಬೆಂಬಲ ನೀಡಿದ್ದರು.