ಅದ್ಭುತ

ನಿಜವಾಯಿತ್ತು, ನಾಗಪಾತ್ರಿಯ ದಿವ್ಯ ದೃಷ್ಟಿ. ಉಡುಪಿಯಲ್ಲಿ ನಡೆದ ಪವಾಡ.

ಕರಾವಳಿಯ ದೈವೀ ಶಕ್ತಿಯಲ್ಲಿ ನಾಗ ದೇವರ ಪ್ರಭಾವ ಕೂಡ ಒಂದು. ಕರಾವಳಿಯ ಎಲ್ಲಾ ಸಮುದಾಯದವರು ನಾಗ ದೇವರನ್ನು ಪೂಜಿಸುವುದು ವಾಡಿಕೆ. ಜಾತಿ ಮತ ಭೇದ ಇಲ್ಲದೆ, ನಾಗ ದೇವರ ಪೂಜೆ ಮಾಡು ಕರಾವಳಿಯ ಜನರಿಗೆ , ಈಗ ನಡೆದಿರುವ ಪವಾಡವೊಂದು ಅಚ್ಚರಿಯನ್ನು ಉಂಟುಮಾಡಿದ್ದೆ.

ಏನೂ ಆ ಪವಾಡ ಇಲ್ಲಿದೆ ನೋಡಿ.

ಪೆರ್ಡೂರಿನ ಒಬ್ಬ ಉದ್ಯಮಿ ಮನೆಯಲ್ಲಿ ಹಲವು ವರ್ಷಗಳಿಂದ ನಾಗನ ಕಲ್ಲು ಮನೆಯ ಪಂಚಾಗದ ಅಡಿಯಲ್ಲಿ ಇದ್ದು, ಮನೆಯವರ ಗಮನಕ್ಕೆ ಬಂದಿರಲಿಲ್ಲ.

ಹಾಗೆಯೆ ಇತ್ತೀಚೆಗೆ ಅವರಲ್ಲಿ ಕೆಲವರಿಗೆ ಪುಣೆಯಲ್ಲಿ ಒಬ್ಬ ನಾಗಪಾತ್ರಿಯವರ ಪರಿಚಯ ಆಯಿತು.ವ್ಯಾಪಾರದ ಸಂಕಷ್ಟಗಳ ಬಗ್ಗೆ ಮಾತಾಡಲು ಅವರನ್ನು ಭೇಟಿಯಾದರು.ಅವರ ಮಾತನ್ನು ಆಲಿಸಿದ ನಾಗ ಪಾತ್ರಿಯವರು, ಥಟ್ಟನೆ ಹೇಳಿದ ಮಾತು ಇದು’ನಿಮ್ಮ ಮನೆಯ ನೆಲದ ಒಳಗೆ ಒಂದು ನಾಗನ ಕಲ್ಲು ಇದೆ ಆದ್ದರಿಂದ ಈ ರೀತಿಯ ಕಷ್ಟ ನಷ್ಟಗಳು ಆಗುತ್ತ ಇದೆ’ ಎಂದು.

ಇದು ನಿಜಕ್ಕೂ ಒಂದು ಕ್ಷಣ ನಂಬಲು ಕಷ್ಟದ ಮಾತಾಗಿತ್ತು .ಕಾರಣ ಇವರಿಗೆ ಹೋದವರು ಯಾರು ಎಂದೇ ಗೊತ್ತಿಲ್ಲ.ಎಲ್ಲಿಂದ ಬಂದವರೆಂದು ಗೊತ್ತಿಲ್ಲ ಅವರ ಮನೆ ಎಲ್ಲಿದೆ ಎಂದು ಕೂಡಾ ಗೊತ್ತಿಲ್ಲ.ಹೀಗಿದ್ದೂ ಅವರ ಮನೆಯ ನೆಲದ ಒಳಗಡೆ ನಾಗನ ಕಲ್ಲು ಇದೆ ಅಂತಿದ್ದಾರಲ್ಲ ಇದು ಸಾಧ್ಯವೇ….????. ಇದು ಹೋದವರ ಮನದಲ್ಲಿ ಮೂಡಿದ ಪ್ರಶ್ನೆಯಾಗಿತ್ತು.ಆದರೂ ನದಿಯಲ್ಲಿ ತೇಲಿಹೋಗುತ್ತಿರುವವನಿಗೆ ಮರದ ತುಂಡೊಂದು ಸಿಕ್ಕಿದ ಹಾಗೆ ಅನುಭವ ಆಯಿತು.ಏನೆ ಆಗಲಿ ಇದನ್ನು ಪರೀಕ್ಷಿಸಲೇ ಬೇಕೆಂದು ಸಹೋದರರು ಒಟ್ಟಾಗಿ ಪುಣೆಯಿಂದ ಪೆರ್ಡೂರಿಗೆ ಹೊರಟರು.ಮೊದಲೇ ಗೊತ್ತು ಮಾಡಿದಂತೆ ವಾದ್ಯದವರನ್ನು ಕರೆದುಕೊಂಡು ಮತ್ತೆ ನಾಗಪಾತ್ರಿಯವರನ್ನು ಜೊತೆಗೆ ಕೂಡಿಕೊಂಡು ಮನೆಗೆ ಹೊರಟರು

ವಾದ್ಯದ ಶಬ್ದದೊಂದಿಗೆ ಪಾತ್ರಿದಾರರಿಗೆ ಆವೇಶವಾಗಿ, ಸೀದಾ ಅವರ ದೈವಸ್ಥಾನದ ಪಕ್ಕದ ಕೋಣೆಗೆ ಹೊರಟರು.ಅಲ್ಲಿಯೇ ನೆಲವನ್ನು ಗೊತ್ತುಪಡಿಸಿ ಇಲ್ಲಿ ಅಗೆಯಿರಿ ಎಂದರು. ಅಗೆಯುವವರು ಅಗೆಯಲು ಪ್ರಾರಂಭಿಸಿದರು.ಅಗೆದು ಅಗೆದು 2 ಅಡಿ ಅಗೆದರು ಏನು ಸಿಗಲಿಲ್ಲ.ಅಗೆಯುವವರಿಂದ ಹಿಡಿದು ಅಲ್ಲಿ ಇದ್ದ ಎಲ್ಲರ ಸಹನೆಯ ಕಟ್ಟೆ ಒಡೆಯಿತು.ಆದರೂ ಅವರ ಮಾತು ಅದೇ…. ಅಲ್ಲೇ ಅಗೆಯಿರಿ ಅಲ್ಲೇ ಇದೆ ಎಂದು ಪುನಃ ಅಗೆಯಲು ಪ್ರಾರಂಭಿಸಿದರು.ಅಗೆದು ಸರಿಸುಮಾರು 3 ಅಡಿ ತಲುಪುವ ಹೊತ್ತಿಗೆ.ಅವರು ಹೇಳಿದ ಜಾಗದಲ್ಲೇ ಸಿಕ್ಕಿತಲ್ಲಾ ಒಂದು ನಾಗನ ಕಲ್ಲು.ಅಂತಿಂಥ ಕಲ್ಲಲ್ಲ ಬಹಳ ಪುರಾತನವಾದ ಕಲ್ಲು.ನೋಡಿದರೆ ಮೈ ಝುಮ್ ಎನ್ನುತದೆ.

ಈ ಕಲ್ಲಿನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಾಗಿದ್ದು, ಸದ್ಯಕ್ಕೆ ಲಭ್ಯವಿರುವ ಮಾಹಿತಿಯನ್ನು ಇಲ್ಲಿ ಹಂಚಿ ಕೊಳ್ಳುತ್ತಿದ್ದೇವೆ.

  • 5.1K
    Shares