ಸುದ್ದಿ ಜಗತ್ತು

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಕೇಸರಿ ಧ್ವಜ ಹಾರಾಡಬೇಕು. ಯೋಗಿ ಆದಿತ್ಯನಾಥ್.

ಉತ್ತರಪ್ರದೇಶ ಹಾಗು ಇತರ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ “ಅಭಿವೃದ್ಧಿ-ಆಧಾರಿತ” ನೀತಿಗಳಿಗೆ ಮತ್ತು ಅಮಿತ್ ಶಾ ಅವರ ಕೌಶಲ್ಯತೆಗೆ ಬಿಜೆಪಿಯು “ಐತಿಹಾಸಿಕ” ಜಯ ಸಾಧಿಸುತ್ತಿದ್ದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿಪ್ರಾಯ ಪಟ್ಟಿದ್ದಾರೆ.

ಭಾರತ ಮಂದಿನ ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕೇಸರಿ ಧ್ವಜ ಹಾರುವಂತೆ ಮಾಡಬೇಕು ಎಂದರು.
ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷದ ಉತ್ತಮ ಪ್ರದರ್ಶನದ ನಂತರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮುಖ್ಯಮಂತ್ರಿಯವರು ಮಾತನಾಡುತ್ತಿದ್ದರು.

“ಈಶಾನ್ಯದಲ್ಲಿನ ಬಿಜೆಪಿಯ ಬಲ ಪ್ರದರ್ಶನವು ಜನರಲ್ಲಿ ಅಭಿವೃದ್ಧಿಯ ಆಕಾಂಕ್ಷೆಗಳನ್ನು ಪೂರೈಸುವ ಹೊಸ ಹುರುಪು ಬಂದಿದ್ದೆ ಎಂದರು.

ಆದಿತ್ಯನಾಥ್ ಮಾತಾಡುತ್ತಾ, ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ, ಈಶಾನ್ಯ ರಾಜ್ಯಗಳು ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಸೇರಲು ಮತ್ತು ಅಭಿವೃದ್ಧಿಯನ್ನು ಆನಂದಿಸಲು ಅವಕಾಶವನ್ನು ಲಭಿಸಿದೆ ಎಂದರು.

  • 3.8K
    Shares