ಸುದ್ದಿ ಜಗತ್ತು

ಕಾಂಗ್ರೆಸ್ ಶಾಸನಕ ಮಗನಿಂದ ವಿಧ್ಯಾರ್ಥಿಯ ಹತ್ಯೆಗೆ ಯತ್ನ. ಪೋಲಿಸರ ರಿಂದ ಪ್ರಕರಣ ತಿರುಚಲು ಷಡ್ಯಂತ್ರ.?

ಶಾಸಕ ಹ್ಯಾರಿಸ್ ಪುತ್ರನ ಪುಂಡಾಟಿಕೆ ಮಿತಿ ಮೀರಿದ್ದು, ಉದ್ಯಮಿ ಪುತ್ರ ವಿದ್ವತ್ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆ ಇದೀಗ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಈತನ ದುರ್ವರ್ತನೆಗೆ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಟೀಕೆ ವ್ಯಕ್ತಪಡಿಸಿದ್ದು, ಖುದ್ದು ರಾಜ್ಯದ ಮುಖ್ಯಮಂತ್ರಿಗಳೇ ತಪ್ಪು ಮಾಡಿದವರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಆದರೀಗ ಪೊಲೀಸರ ವರ್ತನೆ ಮಾತ್ರ ಈ ಪ್ರಕರಣವನ್ನು ತಿರುಚಲು ಯತ್ನಿಸುತ್ತಿದ್ದಾರಾ ಎಂಬ ಅನುಮಾನ ಹುಟ್ಟು ಹಾಕಿದೆ.

ಇಂತಹುದ್ದೊಂದು ಅನುಮಾನ ಬರಲು ಕಾರಣವಾಗಿದ್ದು, ದೂರುದಾರನ ಮೇಲೆಯೇ ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ನಡೆಸಲು ಮುಂದಾಗಿರುವುದು. ಅರುಣ್ ಬಾಬು ಎಂಬವನು ವಿದ್ವತ್ ಮದ್ಯಪಾನದ ಪರೀಕ್ಷೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇವರ ಮನವಿಯಂತೆ ಪರೀಕ್ಷೆ ನಡೆಸಲು ಪೊಲೀಸರು ವೈದ್ಯರಿಗೆ ಸೂಚನೆ ನೀಡಿದ್ದಾರೆ.

ಇಷ್ಟೇ ಅಲ್ಲದೆ ಹ್ಯಾರಿಸ್ ಪುತ್ರ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರೂ ಸೆಕ್ಷನ್ 307ರ ಅಡಿ ಪ್ರಕರಣ ದಾಖಲಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಇನ್ಸ್​ಪೆಕ್ಟರ್ ವಿಜಯ್ ಹಡಗಲಿ ವಿರುದ್ಧ ಕೇಳಿ ಬಂದಿದೆ. ಶಾಸಕ ಹ್ಯಾರಿಸ್ ಪೊಲೀಸ್ ಅಧಿಕಾರಿಯ ವರ್ಗಾವಣೆಗೆ ಶಿಫಾರಸು ಮಾಡಿದ್ದರು ಹೀಗಾಗಿಯೇ ಇನ್ಸ್​ಪೆಕ್ಟರ್ ವಿಜಯ್ ಹಡಗಲಿ ಶಾಸಕನ ಮಗನ ವಿರುದ್ಧ ಕೇಸ್ ದಾಖಲಿಸುವ ವಿಚಾರದಲ್ಲಿ ಮೃದು ಧೋರಣೆ ತಳೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತ ಗೃಹ ಸಚಿವ ರಾಮಲಿಂಗಾ ರೆಡ್ಡಿ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, “ಹೀಗಾಗಿ ಬೆಳಗ್ಗೆಯೇ ಕಮಿಷನರ್​ಗೆ ಕರೆ ಮಾಡಿ ಕಠಿಣ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದೇನೆ. ಅಲ್ಲದೇ ಹ್ಯಾರಿಸ್ ಮಗನೊಂದಿಗೆ ಇದ್ದವರ ವಿರುದ್ಧವೂ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡುವಂತೆ ಸೂಚನೆ ನೀಡಿದ್ದೇನೆ. ಹ್ಯಾರಿಸ್ ಅವರಿಗೂ ಕರೆ ಮಾಡಿ ನಿಮ್ಮ ಮಗನ ಇಂತಹ ವರ್ತನೆಯಿಂದ ನಿಮಗೆ ಹಾಗೂ ನಮ್ಮ ಪಕ್ಷಕ್ಕೆ ಕೆಟ್ಟ ಹೆಸರು ಬರುವಂತೆ ಮಾಡುತ್ತದೆ. ಈ ಸಂದರ್ಭದಲ್ಲಿ ಹ್ಯಾರಿಸ್ ಕೂಡಾ ನಮ್ಮ ಹುಡುಗ ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ಕಾನೂನು ಎಲ್ಲರಿಗೂ ಒಂದ, ಶಾಸಕರ ಮಕ್ಕಳಿಗೂ ಇದು ಅನ್ವಯಿಸುತ್ತದೆ. ತಪ್ಪು ಯಾರೇ ಮಾಡಿದ್ದರೂ ಕಠಿಣ ಕ್ರಮ ಜರುಗಿಸಲಾಗುತ್ತದೆ. ಈಗಾಗಲೇ ಎಫ್​ಐಆರ್​ ದಾಖಲಿಸಲಾಗಿದೆ, ಮುಂದೆ ಅವರನ್ನು ಬಂಧಿಸುತ್ತಾರೆ. ಪರಾರಿಯಾಗಿದ್ದಾರೆ ಹೀಗಾಗಿ ಎಲ್ಲಿ ನೋಡಿದರೂ ಬಂಧಿಸಿ ಎಂದಿದ್ದೇನೆ. ಇನ್ಸ್​ಪೆಕ್ಟರ್​ ತಮಗೆ ನೀಡಿರುವ ಅಧಿಕಾರದ ದುರ್ಬಳಕೆ ಮಾಡಿಕೊಂಡಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ”ಎಂದಿದ್ದಾರೆ.

 

Source : news18