ರಾಷ್ಟ್ರೀಯ

ಈ ಬಾರಿಯ ಆಗಸ್ಟ್15 ನರೆಂದ್ರ ಮೋದಿಯ ಕೊನೆಯ ಭಾಷಣ.

ಕೋಲ್ಕತ್ತಾ, ಮಾರ್ಚ್ 05: ಪ್ರಧಾನಿ ನರೇಂದ್ರ ಮೋದಿಯವರು ಈ ವರ್ಷದ ಆಗಸ್ಟ್ 15 ಅಂದರೆ ಸ್ವಾಂತತ್ರ್ಯ ದಿನದಂದು ರೆಡ್ ಫೋರ್ಟ್ ನಲ್ಲಿ ತಮ್ಮ ಕೊನೆಯ ಭಾಷಣ ಮಾಡಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಭವಿಷ್ಯ ನುಡಿದಿದೆ.

ಬಿಜೆಪಿಯ ಗುರಿ ಬಂಗಾಳವನ್ನು ವಶಪಡಿಸಿಕೊಳ್ಳುವುದಾದರೆ ನಮ್ಮ ಗುರಿ ರೆಡ್ ಫೋರ್ಟ್ ಎಂಬುದು ನೆನಪಿರಲಿ ಎಂದು ಟಿಎಂಸಿ ಮುಖಂಡ ಡೆರೆಕ್ ಒ ಬ್ರಿಯಾನ್ ಸವಾಲೆಸೆದಿದ್ದಾರೆ. ನಾವು ಬಹಿರಂಗವಾಗಿ ಸವಾಲೆಸೆಯುತ್ತೇವೆ. 2019 ರಲ್ಲಿ ರೆಡ್ ಫೋರ್ಟ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡಲು ನರೇಂದ್ರ ಮೋದಿ ಪ್ರಧಾನಿಯಾಗಿರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಈಶಾನ್ಯ ರಾಜ್ಯಗಳ ಬಿಜೆಪಿ ಜಯಭೇರಿಯ ಕುರಿತು ಪ್ರತಿಕ್ರಿಯಿಸಿದ ಅವರು, ತ್ರಿಪುರ, ನಾಗಾಲ್ಯಾಂಡ್ ಗಳ ಸ್ಥಿತಿಯೇ ಪಶ್ಚಿಮ ಬಂಗಾಳದಲ್ಲೂ ಮರುಕಳಿಸುತ್ತದೆ ಎಂದುಕೊಳ್ಳುವುದಕ್ಕಾಗುವುದಿಲ್ಲ. ಈಗಾಗಲೇ ರಾಜಸ್ಥಾನ ಉಪಚುನಾವಣೆಯಲ್ಲಿ ಬಿಜೆಪಿ ಮಣ್ಣು ಮುಕ್ಕಿದೆ. ನೆನಪಿರಲಿ ಎಂದರು.

  • 416
    Shares