ಸ್ಪೂರ್ತಿ

ಈ ಚಾಯ್ ವಾಲನ, ತಿಂಗಳ ಸಂಪಾದನೆ ನೋಡಿದರೆ, ನೀವು ಶಾಕ್ ಆಗ್ತಿರಾ.

ಪುಣೆ : ಚಾಯ್‌ವಾಲಾ ಬಿರುದಾಂಕಿತ ಪ್ರಧಾನಿ ನರೇಂದ್ರ ಮೋದಿ ಅವರು ಪಕೋಡ ಮಾರುವವನನ್ನು ನಿರುದ್ಯೋಗಿ ಎನ್ನುತ್ತೀರಾ ಎಂದು ಪ್ರಶ್ನಿಸಿದ ಬಳಿಕ ವಿರೋಧಿಗಳು ಭಾರೀ ವಿರೋಧವನ್ನು ತೋರಿದ್ದರು. ಇದೀಗ ಪುಣೆಯಲ್ಲಿ ಚಹಾ ಮಾರಾಟಗಾರರೊಬ್ಬರು ತಿಂಗಳಿಗೆ ಬರೋಬ್ಬರಿ 12 ಲಕ್ಷ ರೂಪಾಯಿ ಸಂಪಾದನೆ ಮಾಡುವ ಮೂಲಕ ಭಾರೀ ಸುದ್ದಿಯಾಗಿದ್ದಾರೆ.

ಯವ್ಲೇ ಟೀ ಹೌಸ್‌ ಸಂಸ್ಥಾಪಕರಾಗಿರುವ ನವನಾಥ್‌ ಯವ್ಲೇ ಅವರು ಈ ಸಾಧಕ. ಪುಣೆ ನಗರದಲ್ಲಿ ಅವರ 3 ಮಳಿಗೆಗಳಿದ್ದು ಪ್ರತೀ ಮಳಿಗೆಯಲ್ಲಿ ತಲಾ 12ಮಂದಿ ಉದ್ಯೋಗಿಗಳಿದ್ದಾರೆ.

ನವನಾಥ್‌ ಅವರು ಶೀಘ್ರ ತಮ್ಮ ಬ್ರ್ಯಾಂಡನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಮಾಡುವ ಇರಾದೆ ಹೊಂದಿದ್ದಾರೆ.

ಚಹಾ ಮಾರುವ ಕುರಿತಾಗಿ ಅಪಾರ ಅಭಿಮಾನ ಹೊಂದಿರುವ ನವನಾಥ್‌ ‘ಚಹಾ ಮಾರುವುದು ಒಂದು ಒಳ್ಳೆಯ ಉದ್ಯೋಗ. ನನ್ನ ಉದ್ಯಮದಲ್ಲಿ ಹಲವರಿಗೆ ಉದ್ಯೋಗ ನೀಡಿರುವ ತೃಪ್ತಿ ನನಗಿದೆ’ ಎಂದಿದ್ದಾರೆ.