ಸ್ಪೂರ್ತಿ

ಅನಂತ್ ಕುಮಾರ್ ಹೆಗ್ಡೆಯವರನ್ನ ಅಪಹಾಸ್ಯ ಮಾಡಲು ಹೋಗಿ ಪೇಚಿಗೆ ಸಿಲುಕಿದ ಕಾಂಗ್ರೆಸ್ ಬೆಂಬಲಿತ ಮಾಧ್ಯಮಗಳು.

ಕರ್ನಾಟಕದ ಫೈಯರ್ ಬ್ರಾಂಡ್ ರಾಜಕಾರಣಿ ಅನಂತ್ ಕುಮಾರ್ ಹೆಗ್ಡೆ ಅವರ ಮೆಲೆ ಮತ್ತೊಮ್ಮೆ ಮಾಧ್ಯಮಗಳು ಹಾಗು ಕಾಂಗ್ರೆಸ್ ಪಕ್ಷ ಅಪಹಾಸ್ಯ ಮಾಡಲು ಹೋಗಿ ಪೇಚಿಗೆ ಸಿಲುಕಿದ ಘಟನೆ ಬೆಳಕಿಗೆ ಬಂದಿದೆ.

ಹೌದು, ಸದ್ಯ ಕರ್ನಾಟಕ ರಾಜಕೀಯದ ನಿಷ್ಠುರ ರಾಜಕಾರಣಿ, ನೇರ ನುಡಿಯ, ಪ್ರಖರ ಹಿಂದುತ್ವದ ಪ್ರತಿಪಾದಕ, ಉತ್ತರ ಕನ್ನಡ ಸಂಸದ ಹಿಂದೂ ಫೈಯರ್ ಬ್ರಾಂಡ್ ಖ್ಯಾತಿಯ ಅನಂತ್ ಹೆಗ್ಡೆ ಹೊದ ಬಂದ ಕಡೆಯಲ್ಲಿ ಹೆಗ್ಡೆ ಕಾಲು ಎಳೆಯಲು, ಮಾಧ್ಯಮಗಳು ಹಾಗೂ ಕಾಂಗ್ರೆಸ್ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ರಣಹದ್ದುಗಳ ರೀತಿಯಲ್ಲಿ ಕಾಯುತ್ತಿದ್ದಾರೆ. ಇದಕ್ಕೆ ಚಿಕ್ಕ ಉದಾಹರಣೆ ಅಂದರೆ. ಜನವರಿ 28/2018 ರಂದು ನಡೆದ ಆ ಒಂದು ಚಿಕ್ಕ ಅಪಘಾತ.

ಸಂಸದ ಅನಂತ್ ಕುಮಾರ್ ಕಾರು ಅಪಘಾತ ಮಂದೆನಾಯ್ತು? ನೀವೇ ಓದಿ.

ಸಂಸದ ಅನಂತ್ ಕುಮಾರ್ ಹೆಗ್ಡೆ ಒಂದು ಕಾರ್ಯಕ್ರಮ ಮುಗಿಸಿ ತಮ್ಮ ಇನ್ನೊವಾ ಕಾರಿನಲ್ಲಿ ದೇವನಹಳ್ಳಿ ಬಳಿ ಸಾಗುತ್ತಿರುವ ಸಂದರ್ಭದಲ್ಲಿ ದಾರಿ ಮಧ್ಯೆ ಒಂದು ಕೋತಿ ಕುಳಿತಿದ್ದು , ಹೆಗ್ಡೆ ಅವರ ಮುಂದೆ ಚಲಿಸುತ್ತಿದ್ದ ಪೈಲೆಟ್ ವಾಹನ ಕೋತಿಯನ್ನು ಕಂಡು ಅದು ವಾಹನದ ಅಡಿಯಲ್ಲಿ ಬೀಳುವದನ್ನು ತಪ್ಪಿಸಲು ಚಾಲಕ ಒಮ್ಮೆಲೇ ಬ್ರೇಕ್ ಹಾಕಿದ್ದಾರೆ. ಸಂದರ್ಭದಲ್ಲಿ ಹಿಂದೆ ಇದ್ದ ಹೆಗ್ಡೆ ಅವರ ಕಾರು ಚಾಲಕ ಬ್ರೇಕ್ ಹಾಕಿ ಕಾರ್ ನಿಲ್ಲಿಸಿದ್ದಾರೆ . ಆದರೆ ಹೆಗ್ಡೆ ಅವರ ಹಿಂದೆ ಇರುವ ಮತ್ತೊಂದು ಪೈಲೆಟ್ ವಾಹನ ನಿಯಂತ್ರಣ ತಪ್ಪಿ ಹೆಗ್ಡೆ ಇದ್ದ ಕಾರಿಗೆ ಡಿಕ್ಕಿ ಹೊಡೆದಿದ್ದೆ.

 

ಡಿಕ್ಕಿ ಹೊಡೆದ ಮೇಲೆ ನಿಜಕ್ಕೂ ಮಾನವೀಯತೆ ಮರೆತರೆ ಸಂಸದರು?

ಡಿಕ್ಕಿ ನಡೆದ ತಕ್ಷಣ ಅಂಗ ರಕ್ಷಕರು ಇಳಿಯುವ ಮೊದಲೆ ಕಾರಿನಿಂದ ಇಳಿದ ಸಂಸದರು ಡಿಕ್ಕಿ ಯಾದ ಆ ವಾಹನದ ಬಳಿಗೆ ಧಾವಿಸಿ ಯಾರಿಗಾದರೂ ಎಟ್ಟಾಗಿದೇಯೆ ಎಂದು ವಿಚಾರ ಮಾಡಿದ್ದು ಮಾತ್ರ ಯಾವ ಮಾಧ್ಯಮಗಳಲ್ಲಿ ಅಥವಾ ಕಾಂಗ್ರೆಸ್ ನವರಿಗೆ ಕಾಣಲ್ಲೆ ಇಲ್ಲ.‌ ಸ್ಥಳದಲ್ಲಿ ಹೆಗ್ಡೆ ಅವರು ಎರಡು ಪೈಲೆಟ್ ವಾಹನದಲ್ಲಿ ಇದ್ದ ಅಂಗ ರಕ್ಷಕರ ಯೋಗ ಕ್ಷೇಮ ವಿಚಾರಿಸಿ ದೆಹಲಿಗೆ ತೆರಳಲು ಇದ್ದ ಕಾರಣ ಮುಂದೆ ಸಾಗಿದ್ದಾರೆ. ಬಹುಶಃ ಇದು ಯಾವ ಮಾಧ್ಯಮಗಳ ಕಣ್ಣಿಗೆ ಬೀಳದೆ ಇದದ್ದು ದುರಂತವೆ ಸರಿ.

ಒಂದು ಕೋತಿಯ ಜೀವ ಉಳಿಸುವ ಸಲುವಾಗಿ ನಡೆದ ಅಪಘಾತವನ್ನು ಮಾಧ್ಯಮಗಳು ಹಾಗೂ ಕಾಂಗ್ರೆಸ್ ಅದಕ್ಕೆ ಬಣ್ಣ ಹಚ್ಚಿ ರಾಜಕೀಯ ರೂಪ ಕೊಟ್ಟು ವಿವಾದಗಳನ್ನು ಹುಟ್ಟು ಹಾಕಿದರು. ಆದರೆ ಸತ್ಯ ಯಾವತಿಗೂ ಸತ್ಯವೇ ಅನ್ನುವುದಕ್ಕೆ ಈ ಪ್ರಕರಣವೆ ಸಾಕ್ಷಿ.

ಒಂದು ವೇಳೆ ಆ ಕೋತಿ ಹೆಗ್ಡೆ ಅವರ ವಾಹನದ ಅಡಿಯಲ್ಲಿ ಬಿದ್ದು ಸತ್ತಿದ್ದರೆ ಇದೇ ಮಾಧ್ಯಮಗಳು, ಇದೇ ಕಾಂಗ್ರೆಸ್ ಪ್ರಾಣಿಗಳ ಜೀವಕ್ಕೆ ಬೆಲೆ ಇಲ್ಲ, ಕೋತಿಯನ್ನು ಕೊಂದ ಸಂಸದ ಮಾನವೀಯತೆ ಮರೆತ ಸಂಸದ ಎಂದು ಗಂಟೆಗಟ್ಟಲೆ ಪ್ರಸಾರ ಮಾಡುತ್ತಿದ್ದರು, ಅಪಹಾಸ್ಯ ಮಾಡುತಿದ್ದರು.

ಅದಕ್ಕೆ ಹಿಂದಿನವರು ಒಂದು ಗಾಧೆ ಹೇಳುತ್ತಾರೆ. ಕಣ್ಣಾರೆ ಕಂಡರು ಪರಾಂಬರಿಸಿ ನೋಡು ಎಂದು.

ಪರದೆ ಹಿಂದಿನ ಕಹಿ ಸತ್ಯಕ್ಕೆ ವೀಕ್ಷಿಸುತ್ತಿರಿ Spoorti.net

  • 2.7K
    Shares