ಸುದ್ದಿ ಜಗತ್ತು

ಅತಿಯಾದ ಹಿಂದುತ್ವ ಬೇಡ. ಇಸ್ಲಾಂ ಬಗ್ಗೆ ಟೀಕೆ ಮಾಡಬೇಡಿ. ಹೆಗ್ಡೆಗೆ ಯಡಿಯೂರಪ್ಪ ಎಚ್ಚರಿಕೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದರು ,ಕಮಲ ಪಳಾಯದಲ್ಲಿ ಬಿನ್ನಮತ ಮತ್ತೆ ಮತ್ತೆ ಭುಗಿಲೆಳುತ್ತಲೆ ಇದೆ.‌

ಸದ್ಯ ಕರ್ನಾಟಕದಲ್ಲಿ ಹಿಂದುತ್ವ ಅಲೆಯಲ್ಲಿ ಅಧಿಕಾರ ಪಡೆಯುವ ಅವಕಾಶವನ್ನು ಕಮಲ ಪಾಳಾಯ ನಿದಾನವಾಗಿ ಕೈ ಚೆಲ್ಲಿಕೊಂಡಿದೆ. ರಾಜ್ಯ ಸರಕಾರದ ಹಿಂದು ವಿರೋಧಿ ನೀತಿಯನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು, ಯುವ ಪಡೆಯ ಸಂಪೂರ್ಣ ಬೆಂಬಲ ಹೊಂದಿದ, ಸದ್ಯ ಕರ್ನಾಟಕದ ಹಿಂದು ಹುಲಿ, ಫೈಯರ್ ಬ್ರಾಂಡ್ ನಾಯಕ, ಕರ್ನಾಟಕದ ಯೋಗಿ ಎಂದು ಖ್ಯಾತರಾಗಿದ್ದ ಅನಂತ್ ಕುಮಾರ್ ಹೆಗ್ಡೆ ಅವರಿಗೆ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಅವರು ಎಚ್ಚರಿಕೆ ಕೊಡುವ ಮುಖೇನಾ ಬಿಜೆಪಿ ಕಾರ್ಯರ್ತರಲ್ಲಿ ಅಸಮಾಧಾನಕ್ಕೆ ಕಾರಣರಾಗಿದ್ದಾರೆ.

ತನ್ನ ನೇರ ನುಡಿಯ ಮೂಲಕ, ರಾಜ್ಯ ಸರಕಾರದ ನಿದ್ದೆ ಗೆಡಿಸಿದ ಸಚಿವ ಅನಂತ್ ಕುಮಾರ್ ಹೆಗ್ಡೆ, ಒಂದು ಹಂತದಲ್ಲಿ ಮುಂದಿನ ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಮಾತುಗಳು ಕೇಳಿ ಬಂದಿದ್ದು, ಅಷ್ಟರ ಮಟ್ಟಿಗೆ ಹೆಗ್ಡೆ ಹವಾ ರಾಜ್ಯದಲ್ಲಿ ಉಂಟುಮಾಡಿದ್ದರು. ಆದರೆ ಹೆಗ್ಡೆ ಪ್ರಂಟ್ ಲೈನ್ ಗೆ ಬರುತ್ತಿಂದತೆ ರಾಜ್ಯ ನಾಯಕರಲ್ಲಿ ಅಸಮಾಧಾನ ಹೊಗೆಯಾಡಲು ಆರಂಭವಾಗಿದ್ದು, ಅದರ ಮುನ್ನುಡಿಯಾಗಿ ಬಿಜೆಪಿ
ರಾಜ್ಯಧ್ಯಕ್ಷ ಯಡಿಯೂರಪ್ಪನವರು ಹೆಗ್ಡೆ ಅವರಿಗೆ ಎಚ್ಚರಿಕೆ ನೀಡಿದ್ದು ಈಗ ಕಾರ್ಯಕರ್ತರಲ್ಲಿ ಆಕ್ರೋಶವನ್ನು ಉಂಟು ಮಾಡಿದೆ.

ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗ್ಡೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಯಾರೊಬ್ಬರು ಸಮುದಾಯಗಳನ್ನು ಕೆರಳಿಸುವ ಹೇಳಿಕೆ ನೀಡಬಾರದು. ನಾನು ಅಂತಹ ಯಾವುದೇ ಹೇಳಿಕೆಗಳನ್ನು ಒಪ್ಪುವುದಿಲ್ಲ. ಅನಂತ ಕುಮಾರ್ ಹೆಗ್ಡೆಗೆ ನಾನು ಇಂತಹ ಹೇಳಿಕೆಗಳನ್ನು ನೀಡದಂತೆ ಸೂಚನೆ ನೀಡಲಾಗಿದೆ ಅಂತ ಖಾಸಗಿ ವಾಹಿನಿಯೊಂದರಲ್ಲಿ ಬಿಎಸ್‍ವೈ ಹೇಳಿದ್ದಾರೆ.

ಇತ್ತೀಚಿಗಷ್ಟೇ ಅನಂತ್ ಕುಮಾರ್ ಹೆಗ್ಡೆ ಎಲ್ಲಿವರೆಗೂ ಇಸ್ಲಾಂ ಬೇರುಗಳನ್ನು ಕೀಳುವುದಿಲ್ಲವೋ ಅಲ್ಲಿವರೆಗೂ ಭಯೋತ್ಪಾದನೆ ಬೇರ್ಪಡೆ ಅಸಾಧ್ಯ ಅಂತ ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆಗಳನ್ನು ನೀಡಬಾರದು. ಈ ಬಗ್ಗೆ ಸಂಸತ್‍ನಲ್ಲಿ ಈಗಾಗಲೇ ಕ್ಷಮೆಯಾಚಿಸಿದ್ದಾರೆ ಅಂತ ಬಿಎಸ್‍ವೈ ಸ್ಪಷ್ಟಪಡಿಸಿದ್ರು.

  • 1.9K
    Shares